ಇಂದು ಎನಗೆ ಗೋವಿಂದ
ರಾಘವೇಂದ್ರ ತೀರ್ಥರುಇಂದು ಎನಗೆ ಗೋವಿಂದ ನಿನ್ನ
ಪಾದಾರವಿಂದವ ತೋರೋ ಮುಕುಂದನೇ ।
ಸುಂದರ ವದನನೇ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ॥
ನೊಂದೆನಯ್ಯ ನಾ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ।
ಕಂದನಂತೆ ಎನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೇ ॥1॥
ಮೂಢತನದಿ ಬಲು ಹೇಡಿ ಜೀವನನಾಗಿ
ದೃಢಭಕ್ತಿಯನು ಮಾಡಲಿಲ್ಲವೋ ಹರಿಯೇ ।
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ ॥2॥
ಧಾರುಣಿಯೊಳು ಬಹು ಭಾರ ಜೀವನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ ।
ಆರು ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ ॥3॥
॥ ಇಂದು ಎನಗೆ ಗೋವಿಂದ ಸಂಪೂರ್ಣ ॥